ಹೆಚ್ಚಿನ ಸುದ್ದಿಗಳಿಗಾಗಿ Whatsapp ಗುಂಪಿಗೆ ಸೇರಿಕೊಳ್ಳಿ
Gruhalakshmi – ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಫಲಾನುಭವಿಗಳಿಗೆ ಬಂದಿಲ್ಲ. ಜುಲೈ, ಆಗಸ್ಟ್ ಮುಗಿದು ಸೆಪ್ಟೆಂಬರ್ ಅಂತ್ಯಗೊಂಡರೂ ಗೃಹಲಕ್ಷ್ಮಿ ಹಣ ಮಾತ್ರ ಲಕ್ಷ್ಮಿಯರ ಖಾತೆಗೆ ಸೇರಿಲ್ಲ. ಇದು ಗೃಹಿಣಿಯರ ಕೆಂಗಣ್ಣಿಗೆ ಗುರಿಯಾಗಿದೆ. ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾಗಿಲ್ಲ. ಇನ್ನು ಪ್ರತಿ ತಿಂಗಳು ₹1.21 ಕೋಟಿ ಹಣ ಬಿಡುಗಡೆ ಆಗಬೇಕು. ಆದರೆ, ಇಲಾಖೆ ಹಣ ಬಿಡುಗಡೆ ಮಾಡದ ಕಾರಣ ಈ ತಿಂಗಳು ಗೃಹಲಕ್ಷ್ಮಿ ಹಣ ಬರುವುದು ಡೌಟ್ ಎನ್ನಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಂಡಿದೆ. ಯೋಜನೆ ಜಾರಿಯಾದಾಗಿನಿಂದ ಹಲವಾರು ಅಡೆತಡೆಗಳು ಉಂಟಾಗಿದ್ದು, ಗೃಹಲಕ್ಷ್ಮಿ ಈಗ ಬ್ಯಾಂಕ್‌ಗೆ ತೆರಳಲು ಅಥವಾ ಹಣ ಪಡೆಯದೆ ಮನೆಗೆ ಮರಳಲು ಹೆಣಗಾಡುತ್ತಿದ್ದಾರೆ. ಹೌದು, ಜುಲೈ, ಆಗಸ್ಟ್ ಮುಗಿದು ಸೆಪ್ಟೆಂಬರ್ ತಿಂಗಳು ಕಳೆದರೂ ಗೃಹಲಕ್ಷ್ಮಿ ಹಣ ಲಕ್ಷ್ಮಿ ಖಾತೆಗೆ ಸೇರಿಲ್ಲ. ಇದು ಗೃಹಿಣಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಇದಕ್ಕೆ ಕಾರಣ ನೋಡಿದರೆ ಹಣಕಾಸು ಇಲಾಖೆಯಿಂದ ಅನುದಾನ ಬಂದಿಲ್ಲ. ಪ್ರಸ್ತುತ ಮೂರು ಮಾಸಿಕ ಪಾವತಿಗೆ ಇಲಾಖೆ ಮನವಿ ಮಾಡಿದ್ದು, ಹಣಕಾಸು ಇಲಾಖೆ ಮಾಸಿಕ ಪಾವತಿ ಮಾಡಿದೆ. ಗೃಹಲಕ್ಷ್ಮಿಗೆ ಪ್ರತಿ ತಿಂಗಳು 2500 ಕೋಟಿ ಬೇಕು. ಮೂರು ತಿಂಗಳ ಅನುದಾನ ಮಂಜೂರು ಮಾಡುವ ಕುರಿತು ಪತ್ರವನ್ನೂ ಕಳುಹಿಸಲಾಗಿದೆ, ಅಂದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಒಟ್ಟು 7500 ಕೋಟಿಗಳನ್ನು ನಿಗದಿಪಡಿಸಲಾಗಿದೆ ಮತ್ತು ಈ ನಿಧಿಗಳು ಸಹ ಪರಿಶೀಲನೆಯಲ್ಲಿವೆ.
ಹೆಚ್ಚಿನ ಸುದ್ದಿಗಳಿಗಾಗಿ Whatsapp ಗುಂಪಿಗೆ ಸೇರಿಕೊಳ್ಳಿ
One thought on “Gruhalakshmi – ಮತ್ತೆ ಫಲಾನುಭವಿಗಳು ಕಂಗಾಲು – ‘ಕೈ’ ಕೊಟ್ಟ ಗೃಹಲಕ್ಷ್ಮಿ..”